It was a pleasant surprise to note very interesting educational initiative undertaken by this institution. Blending traditional and modern education system is astonishing. I appreciate Acharyas and trustees. It is a Great experiment. Keep it up...
Pleasant
ಪ್ರಬೋಧಿನೀ ಗುರುಕುಲದಲ್ಲಿ ವಿಶಿಷ್ಠವಾದ ಶಿಕ್ಷಣವನ್ನು ಕಲಿಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಚಟುವಟಿಕೆಶೀಲರು. ಇವರನ್ನು ನೋಡಿ ಆನಂದಲೋಕದಲ್ಲಿ ವಿಹರಿಸಿದೆ.
ಶ್ರೀ ಬಾಬು ಕೃಷ್ಣಮೂರ್ತಿ
ಖ್ಯಾತ ಬರಹಗಾರರುಗಳು
ಪ್ರಬೋಧಿನೀ ಗುರುಕುಲದಲ್ಲಿ ನೀಡುತ್ತಿರುವ ಭಾರತೀಯ ಪರಂಪರೆಯ ಶಿಕ್ಷಣ ಇಂದಿನ ಕಾಲಕ್ಕೆ ಅತ್ಯವಶ್ಯವಾಗಿದೆ. ಭಾರತೀಯ ಜ್ಞಾನರಾಶಿಯ ಅಧ್ಯಯನ ಹಾಗೂ ಅಧ್ಯಾಪನ ಕಾರ್ಯ ಇಲ್ಲಿ ನಡೆಯುತ್ತಿದೆ. ಮೈಸೂರು ಸಂಸ್ಥಾನವು ಗುರುಕುಲದ ಎಲ್ಲಾ ಕಾರ್ಯಗಳ ಜೊತೆಗಿರುತ್ತದೆ.
ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಿ
ಮೈಸೂರು ಸಂಸ್ಥಾನ
इदं गुरुकुलम् अत्यंतं समीचीनं वर्तते। सुन्दर् वातावरणं रमणीयं वर्तते। अत्र स्थितव्यवस्था, पाठक्रमः तथा वॆदमन्त्रॊच्चरणं दृष्ट्वा सन्तॊषः अभवत्। अस्माकं हिन्दूपरम्परासहितं इदं गुरुकुलम् इतॊपि वर्धताम् अभिवर्धताम् इति आशास्महे।
विद्वान गणॆश भट्टः
प्रधान अर्चहक्ः, श्री पशुपतिनाथ मन्दिरम्।
काठ्माण्डु. नॆपाल.
ಗುರುಕುಲ ಮಾದರಿಯ ಶಿಕ್ಷಣವನ್ನು ಇಡೀ ಜಗತ್ತೇ ಒಪ್ಪಿಕೊಳ್ಳುವ ದಿನಗಳು ಮುಂದೆ ಬರಲಿವೆ. ಈ ನಿಟ್ಟಿನಲ್ಲಿ ಪ್ರಬೋಧಿನೀ ಗುರುಕುಲದ ಚಟುವಟಿಕೆಗಳು ದೇಶದಾದ್ಯಂತ ವಿಸ್ತಾರವಾಗಬೇಕು. ಮುಂಬರುವ ದಿನಗಳಲ್ಲಿ ಪ್ರಬೋಧಿನೀ ಗುರುಕುಲದಲ್ಲಿರುವಂತೆಯೇ ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಕೂಡ ಗುರುಕುಲ ಮಾದರಿಯ ಶಿಕ್ಷಣವನ್ನು ಜಾರಿಗೆ ತರುತ್ತೇವೆ.
ಪೂಜ್ಯ ಶ್ರೀ ಡಾ|| ಮಧುಸೂದನ ಸಾಯಿ
ಶ್ರೀ ಸತ್ಯಸಾಯಿ ಸಮೂಹ ಸಂಸ್ಥೆ. ಮುದ್ದೇನಹಳ್ಳಿ,
ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರಗಳಲ್ಲಿ ಪಾಲ್ಗೊಂಡಿರುವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹೊಸ ವಿಷಯ ಕಲಿಯುವ ಬಗ್ಗೆ ಇರುವ ಆಸಕ್ತಿ ನಿಜಕ್ಕೂ ಅದ್ಭುತ. ಸಮಾಜದ ಅನೇಕ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ ಮಕ್ಕಳೊಂದಿಗೆ ಸಂವಾದದಂತಹ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಶುಭವಾಗಲಿ.
ಡಾ|| ಸಿ.ಆರ್. ಚಂದ್ರಶೇಖರ್. ಮನೋ ವೈದ್ಯರು.ಗಳು
ನಿಮ್ಹಾನ್ಸ್, ಬೆಂಗಳೂರು.
ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳ ಲವಲವಿಕೆ, ಉತ್ಸಾಹಗಳನ್ನು ನೋಡಿ ಆನಂದವಾಗಿದೆ. ಇಲ್ಲಿನ ವಿದ್ಯಾರ್ಥಿಗಳಲ್ಲಿರುವ ಪ್ರಶ್ನೆ ಮಾಡುವ ಸ್ವಭಾವವು ಅಚ್ಚರಿ ಮೂಡಿಸುವಂತಹದ್ದು. ಭಾರತೀಯ ಸಂಸ್ಕೃತಿಯೇ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಜೀವಾಳವಾಗಿದೆ.
ಡಾ|| ಎಸ್.ಎಲ್. ಬೈರಪ್ಪ,
ಖ್ಯಾತ ಸಾಹಿತಿಗಳು. ಮೈಸೂರು
There is no other issues more important than Education in India. And the Education in India Should be rooted by ancient values. The main goal of Prabodhini Gurukula is to cultivate Ancient Vedic culture among the society. And the Vedic Gurukula Model of Education is the ultimate solution for modern Problems. Prabodhini Gurukula should gain capacity to teach Vedic culture to the world.
Padmabhushan Dr. David Frawley
U.S.A.
गुरुकुल ने विश्व के सबसे प्राचीन वेद जैसे साहित्य का अभ्यास करने का एक खुला अवसर प्रदान किया है। इस गुरुकुल को विकसित करना हिंदू समाज की जिम्मेदारी है। एक दिन पूरी दुनिया गुरुकुल प्रणाली के बारे में सुनेगी। तब हमें देना चाहिए, यह गर्व की बात है कि प्रबोधिनी गुरुकुल आयु के अनुरूप गुरुकुल शिक्षा प्रदान कर रहा हैं।
माननीय डॉ मोहन भागवत
परम आदरणीय सरसंघचालक,
राष्ट्रीय स्वयंसेवकसंघ, नागपुर,
ಗುರುಕುಲ ಮಾದರಿಯ ಶಿಕ್ಷಣವು ಆಧುನಿಕ ಶಿಕ್ಷಣಕ್ಕೆ ಬಲವಾದ ಪರ್ಯಾಯ ಪದ್ಧತಿಯಾಗಿದೆ. ಹಣ ಗಳಿಸುವುದೊಂದೇ ಆಧುನಿಕ ಶಿಕ್ಷಣದ ಗುರಿಯಾದರೆ, ಮನುಕುಲದ ಸರ್ವಾಂಗೀಣ ಉನ್ನತಿಯೇ ಪ್ರಾಚೀನ ಗುರುಕುಲ ಮಾದರಿಯ ಮಹೋನ್ನತ ಧ್ಯೇಯವಾಗಿದೆ. ಇಂತಹ ಉದಾತ್ತ ಧ್ಯೇಯವನ್ನಿರಿಸಿಕೊಂಡು ಪ್ರಬೋಧಿನೀ ಗುರುಕುಲವು ಕಾರ್ಯೋನ್ಮುಖವಾಗಿದೆ.
ಪದ್ಮಶ್ರೀ ಡಾ|| ವಿ.ಆರ್. ಗೌರೀಶಂಕರ್.
ಮಾನ್ಯ ಆಡಳಿತಾಧಿಕಾರಿಗಳು.
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ. ಶೃಂಗೇರಿ.
ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳಲ್ಲಿ ಶಿಸ್ತು, ಕರ್ತವ್ಯ ನಿಷ್ಠೆ, ಛಲ, ಶ್ರದ್ಧೆ, ರಾಷ್ಟ್ರಾಭಿಮಾನ ಮತ್ತು ಸಮರ್ಪಣಾ ಮನೋಭಾವಗಳು ತುಂಬಿರುವುದು ಸಂತೋಷದ ಸಂಗತಿ. ಪ್ರಬೋಧಿನೀ ಗುರುಕುಲವು 24 ವರ್ಷಗಳನ್ನು ಪೂರೈಸಿದ ಶುಭಸಂದರ್ಭದರ್ಲ್ಲಿ ಶ್ರೀ ಪೀಠವು ಗುರುಕುಲವನ್ನು ಸಂದರ್ಶಿಸಿದಾಗ ಈ ಎಲ್ಲಾ ವಿಷಯಗಳು ಆನಂದವನ್ನುಂಟುಮಾಡಿದೆ.
ಶ್ರೀಮದ್ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು.
ಶ್ರೀ ರಂಭಾಪುರಿ ಪೀಠ. ಬಾಳೆಹೊನ್ನೂರು
ಗುರುಕುಲ ಮಾದರಿಯ ಶಿಕ್ಷಣ ಅತ್ಯಂತ ಮಹತ್ವದ್ದು, ಕೇವಲ ಪುಣ್ಯ ವಂತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಆಹಾರ, ನಿದ್ರೆ, ಆಟಗಳೊಂದಿಗೆ ಅಧ್ಯಯನ ಮಾಡಿದಾಗ ಮಾತ್ರ ಸಮಗ್ರ ವ್ಯಕ್ತಿತ್ವ ವಿಕಾಸವಾಗುತ್ತದೆ. ಬರೀ ಅಧ್ಯಯನ ಮಾತ್ರ ಮಾಡಿದರೆ ಅದು ಸಮಗ್ರ ವಿಕಾಸವಾಗುವುದಿಲ್ಲ
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ಶಿವ ಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠ. ಚಿತ್ರದುರ್ಗ
ಪಾರಂಪರಿಕ ಶಿಕ್ಷಣ, ಆರೋಗ್ಯ, ಸಂಸ್ಕಾರ, ಮಾನವೀಯ ಮೌಲ್ಯಗಳು, ಮುಂತಾದ ಅನೇಕ ಸದ್ಗುಣಗಳು ಪ್ರಬೋಧಿನೀ ಗುರುಕುಲದಲ್ಲಿ ವಿಕಾಸವಾಗುತ್ತಿದೆ. ಇಂತಹ ಗುರುಕುಲವು ನಮ್ಮ ನಡುವಲ್ಲೇ ಕಾರ್ಯನಿರತವಾಗಿರುವುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ತಂದಿದೆ.
ಡಾ|| ಭೀಮೇಶ್ವರ ಜೋಶಿ.
ಧರ್ಮಕರ್ತರು. ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ
ಳು
ಶ್ರೀ ಕ್ಷೇತ್ರ. ಹೊರನಾಡು.
ಪ್ರಬೋಧಿನೀ ಗುರುಕುಲದ ಪರಿಸರ ಸುಂದರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಭವಿಷ್ಯದಲ್ಲಿ ತಾವೇನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಅವರಲ್ಲಿದೆ. ಶುಭಾಶಯಗಳು
ಶ್ರೀಮತಿ ತೇಜಸ್ವಿನೀ ಅನಂತಕುಮಾರ್.
ಸಂಸ್ಥಾಪಕರು. ಅದಮ್ಯ ಚೇತನ ಸಂಸ್ಥೆ. ಬೆಂಗಳೂರು.
ಮನುಷ್ಯನ ಸರ್ವತೋಮುಖ ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ.ಪ್ರಾಚೀನ ಭಾರತದಲ್ಲಿ ಗುರುಕುಲ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯಶಾಲಿ ವ್ಯಕ್ತಿತ್ವ ನಿರ್ಮಾಣವಾಗುತ್ತಿತ್ತು. ಇಂದಿನ ದಿನಮಾನದಲ್ಲಿ ಪ್ರಾಚೀನ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸುತ್ತಿರುವ ಪ್ರಬೋಧಿನೀ ಗುರುಕುಲದ ಕಾರ್ಯ ಪ್ರಶಂಸನೀಯ.
ಶ್ರೀಮಜ್ಜಗದ್ಗುರು ಆದಿಶಂಕರಾಚಾರ್ಯ ಶ್ರೀ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಶ್ರೀ ಬದರೀಶಂಕರಾಚಾರ್ಯ ಸಂಸ್ಥಾನಂ.
ಶ್ರೀವಿದ್ಯಾಪೀಠಮ್.ಶ್ರೀ ಕ್ಷೇತ್ರ ಶಕಟಪುರಮ್. ಕೊಪ್ಪ.
ನಮ್ಮ ಸನಾತನ ಸಂಸ್ಕೃತಿಯು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನ ಹಾಗೂ ಪರಿಪೂರ್ಣ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕೃತಿಯ ಹಿರಿಮೆ ಹಾಗೂ ಭವ್ಯತೆಯನ್ನು ಸಂರಕ್ಷಿಸಿಕೊಳ್ಳಬೇಕಾದರೆ, ನಮ್ಮ ಆರ್ಷ ಗ್ರಂಥಗಳ ಆಧಾರದಲ್ಲಿ ನಿರ್ಮಾಣವಾದ ಗುರುಕುಲ ಮಾದರಿಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾಗಿದೆ. ಇಂತಹ ಉದ್ದೇಶದಿಂದ ಪ್ರಬೋಧಿನೀ ಗುರುಕುಲವು ಕಾರ್ಯ ನಿರ್ವಹಿಸುತ್ತಿದೆ.
ಶ್ರೀ ಮಜ್ಜಗದ್ಗುರು ಆದಿಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು.
ಶ್ರೀಮಠ ಹರಿಹರಪುರ
ಸನಾತನ ಸಂಸ್ಕೃತಿಯ ಆಧಾರದಲ್ಲಿ ಶಿಕ್ಷಣ ನೀಡಬೇಕಾದುದು ಈಗಿನ ಕಾಲದ ತುರ್ತು ಅಗತ್ಯವಾಗಿದೆ. ಇಂತಹ ಪ್ರಾಮಾಣಿಕ ಪ್ರಯತ್ನವನ್ನು ಪ್ರಬೋಧಿನೀ ಗುರುಕುಲದಲ್ಲಿ ನಾವು ನೋಡಬಹುದಾಗಿದೆ. ಸುಂದರ ವಾತಾವರಣ, ಸರಳ ಜೀವನಶೈಲಿ. ಉತ್ತಮ ಶಿಕ್ಷಣ ವ್ಯವಸ್ಥೆ ಇಲ್ಲಿದೆ.
ಶ್ರೀಮಜ್ಜಗದ್ಗುರು ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು
ಶ್ರೀ ಸೋಂದಾ ಸ್ವರ್ಣವಲ್ಲಿ ಸಂಸ್ಥಾನಂ. ಉತ್ತರಕನ್ನಡ ಜಿಲ್ಲೆ
ಭಾರತವೆಂದರೆ ವೇದ, ಪುರಾಣ, ಉಪನಿಷತ್ತು, ರಾಮಾಯಣ, ಮಹಾಭಾರತ ಮುಂತಾದ ಅಮೂಲ್ಯ ವಿದ್ಯೆಗಳ ಭಂಡಾರ. ಅಂತಹ ಅಮೂಲ್ಯ ವಿದ್ಯೆಯನ್ನು ಹಂಚಿದಷ್ಟೂ ಹೆಚ್ಚಾಗುತ್ತದೆ. ಪ್ರಬೋಧಿನೀ ಗುರುಕುಲದಲ್ಲಿ ಆರ್ಷವಿದ್ಯೆಯ ಪ್ರಸಾರಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶುಭವಾಗಲಿ.
ಶ್ರೀಮಜ್ಜಗದ್ಗುರು ಆದಿಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ಶ್ರೀ ಕ್ಷೇತ್ರ ರಾಮಚಂದ್ರಾಪುರ ಮಠ
ಪ್ರಬೋಧಿನೀ ಗುರುಕುಲದಲ್ಲಿ ನೀಡುತ್ತಿರುವ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣವು ಅತ್ಯಂತ ವೈಜ್ಞಾನಿಕವಾಗಿದೆ. ಬದುಕುವ ಕಲೆಯನ್ನು ಇಲ್ಲಿ ಕಲಿಸಿಕೊಡಲಾಗುತ್ತಿದೆ. ಮ್ನಮ್ಮ ಸಂಸ್ಕೃತಿ ಪರಂಪರೆಯನ್ನು ಗೌರವಿಸುವ ಮನೋಭಾವ ಇಲ್ಲಿನ ವಿದ್ಯಾರ್ಥಿಗಳಲ್ಲಿದೆ
ಶ್ರೀ ಶ್ರ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು
ಶ್ರೀ ಮಠ. ಪೇಜಾವರ. ಉಡುಪಿ
ಪ್ರಬೋಧಿನೀ ಗುರುಕುಲದ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಲ್ಲಿನ ಶಿಸ್ತುಬದ್ಧ ಜೀವನಶೈಲಿ, ಸಂಸ್ಕೃತದಂತಹ ಶ್ರೇಷ್ಷ್ಠ ಸಾಹಿತ್ಯಗಳ ಅಧ್ಯಯನ, ಅಧ್ಯಾಪನ ಎಲ್ಲವೂ ಅತ್ಯಂತ ವಿಶಿಷ್ಠವಾಗಿದೆ.
ಸ್ವಾಮಿ ಜಿತಕಾಮಾನಂದ ಮಹರಾಜ್
ಶ್ರೀ ರಾಮಕೃಷ್ಣ ಮಿಷನ್. ಮಂಗಳೂರು
भारतीय संस्कृति सर्वदेशीय है। हमारी एक महान संस्कृति है जो अनादि काल से विश्व को ज्ञान का प्रकाश देती आ रही है। गुरुकुल जैसी संस्थाएं ही कारण हैं कि यह संस्कृति आज भी जीवित है। प्रबोधिनी गुरुकुल जैसी संस्थाएं पूरे देश में शुरू की जानी हैं।
श्री इंद्रेश कुमार
वरिष्ठ प्रचारक।
राष्ट्रीय स्वयंसेवक संघ,
प्रबोधिनी गुरुकुल आज पूरे देश में प्रसिद्ध हो गया है। प्रबोधिनी गुरुकुल शिक्षा के पारंपरिक गुरुकुल मॉडल को लागू करने में अन्य संस्थानों के लिए एक संरक्षक संस्थान है।
श्री सुरेश सोनी
मान्य सहसरकार्यवाह।
राष्ट्रीय स्वयंसेवक संघ।
ಪ್ರಬೋಧಿನೀ ಗುರುಕುಲದ ಚಟುವಟಿಕೆಗಳನ್ನು ಆರಂಭದ ದಿನದಿಂದಲೂ ನೋಡುತ್ತಿದ್ದೇನೆ. ಭಾರತೀಯ ಶಾಸ್ತ್ರ ಹಾಗೂ ಕ್ಷಾತ್ರ ಎರಡೂ ಮೌಲ್ಯಗಳ ಅನುಷ್ಠಾನ ಈ ಗುರುಕುಲದಲ್ಲಿ ನಡೆಯುತ್ತಿದೆ. ಪ್ರಾಚೀನ ಜ್ಞಾನದೊಂದಿಗೆ ರಾಷ್ಟ್ರೀಯ ಚಿಂತನೆಗಳನ್ನು ಈ ಗುರುಕುಲದಲ್ಲಿ ಅಳವಡಿಸಿಕೊಂಡಿದ್ದಾರೆ.
ಶ್ರೀ ದತ್ತಾತ್ರೇಯ ಹೊಸಬಾಳೆ
ಮಾನ್ಯ ಸರಕಾರ್ಯವಾಹರು.
ರಾಷ್ಟ್ರೀಯ ಸ್ವಯಂಸೇವಕ ಸಂಘ
आधुनिक शिक्षा के हमले के बीच, प्रबोधिनी गुरुकुल प्राचीन गुरुकुल प्रणाली को पुनर्जीवित करने के लिए लगातार काम कर रहा है।
श्री सुरेश जोशी (भय्याजी)
वरिष्ठ प्रचारक।
राष्ट्रीय स्वयंसेवकसंघ
ಸಮಾಜದ ಪ್ರತಿಯೊಬ್ಬನೂ ಕ್ರಿಯಾಶೀಲನಾದಾಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ನಿಷ್ಕ್ರಿಯ ಸಮಾಜಕ್ಕೆ ಜೀವ ತುಂಬುವ ಕೆಲಸ ಪ್ರಬೋಧಿನೀ ಗುರುಕುಲದಲ್ಲಿ ನಡೆಯುತ್ತಿದೆ.
ಶ್ರೀ ಬಿ.ಎಲ್.ಸಂತೋಷ್
ರಾಷ್ತ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ. ಭಾ.ಜ.ಪಾ. ನವದೆಹಲಿ
ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ಪ್ರಬೋಧಿನೀ ಗುರುಕುಲದ ಎಲ್ಲಾ ಯೋಜನೆಗಳಿಗೆ ಪೂರ್ಣ ಸಹಕಾರ ನೀಡಬೇಕಾದುದು ಎಲ್ಲರ ಕರ್ತವ್ಯವಾಗಿದೆ.
ಶ್ರೀ ಎಸ್.ವಿ.ಮಂಜುನಾಥ್
ಮಾಜಿ ಜಿಲ್ಲಾ ಪಂಚಾಯತ್. ಅಧ್ಯಕ್ಷರು. ಚಿಕ್ಕಮಗಳೂರು
ಭಾರತವನ್ನು ಭಾರತವನ್ನಾಗಿಯೇ ಉಳಿಸಬೇಕಾದರೆ ಮತ್ತೊಮ್ಮೆ ದೇಶದಲ್ಲಿ ಗುರುಕುಲ ಪದ್ಧತಿಯ ಪುನರ್ ಪ್ರತಿಷ್ಠಾಪನೆಯಾಗಬೇಕು. ಪ್ರಬೋಧಿನೀ ಗುರುಕುಲವು ಶಿಕ್ಷಣ ಕ್ಶೇತ್ರದಲ್ಲಿ ಬದಲಾವಣೆ ತರಲು ದೃಢವಾದ ಹೆಜ್ಜೆಯನ್ನಿಟ್ಟಿದೆ.
ಶ್ರೀ ಸು. ರಾಮಣ್ಣ
ಜ್ಯೇಷ್ಠ ಪ್ರಚಾರಕರು. ರಾಷ್ಟ್ರೀಯ ಸ್ವಯಂಸೇವಕ ಸಂಘ.
ಸಮಾಜಕ್ಕೆ ಅಗತ್ಯವಾದ ಪಾರಂಪರಿಕ ವಿದ್ಯೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಪ್ರಬೋಧಿನೀ ಗುರುಕುಲವು ನಿರಂತರವಾಗಿ ಮಾಡಿಕೊಂದು ಬಂದಿದೆ. ನಮ್ಮ ದೇಶದಲ್ಲಿರುವ ಲಕ್ಷಾಂತರ ಶಾಲೆಗಳಲ್ಲಿ ಗುರುಕುಲದ ಮೌಲ್ಯಗಳನ್ನು ಪ್ರಚುರಪಡಿಸಬೇಕಾಗಿದೆ.
ಶ್ರೀ ಮುಕುಂದ
ಸಹ ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ
ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳಲ್ಲಿ ಹೊಸತನ್ನು ಕಲಿಯುವ ಅಪರೂಪದ ಗುಣವಿದೆ. ಅವರ ಆಸಕ್ತಿಗೆ ತಕ್ಕಂತಹ ಪಠ್ಯವಸ್ತುಗಳನ್ನು ಹೊಂದಿಸಿರುವ ಇಲ್ಲಿನ ಶಿಕ್ಷಣ ಪದ್ಧತಿಯು ಉಳಿದೆಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಶ್ರೀ ಚಕ್ರವರ್ತಿ ಸೂಲಿಬೆಲೆ
ಚಿಂತಕರು. ಸಂಸ್ಥಾಪಕರು ಯುವಾ ಬ್ರಿಗೇಡ್
प्रबोधिनी गुरुकुल में जाकर अच्छा लगा। परीक्षा डर के बिना खुले वातावरण में पढ़ने वाले बच्चे भाग्यशाली हैं।
श्री लालकृष्ण आडवाणी।
वरिष्ठ . भा.ज.पा
ಪ್ರಬೋಧಿನೀ ಗುರುಕುಲವು ನಿಜವಾದ ಅರ್ಥದಲ್ಲಿ ಗುರುಕುಲವೇ ಆಗಿದೆ. ನದೀತೀರದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ.
ಶ್ರೀ ಬಿ.ಎಸ್. ಯಡಿಯೂರಪ್ಪ
ಹಿರಿಯ ಮುತ್ಸದ್ದಿಗಳು. ಭಾ.ಜ.ಪಾ.
ಇಲ್ಲಿ ಕಲಿಯುತ್ತಿರುವ ಚಿಕ್ಕ ಚಿಕ್ಕ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆ ತುಂಬಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಶಾಸ್ತ್ರ ಹಾಗೂ ಕ್ಷಾತ್ರ ಎರಡೂ ಆಯಾಮಗಳ ವಿಕಾಸ ಇಲ್ಲಿನ ಮಕ್ಕಳ ಜೀವನದಲ್ಲಿ ಆಗುತ್ತಿದೆ.
ಶ್ರೀ ಜಗದೀಶ ಕಾರಂತ.
ಕ್ಷೇತ್ರೀಯ ಸಂಘಟಕರು. ಹಿಂದೂ ಜಾಗರಣ ವೇದಿಕೆ
ಪ್ರಬೋಧಿನೀ ಗುರುಕುಲವು ದೇಶವೇ ಮೊದಲು ಎಂಬ ಭಾವವನ್ನು ಮಕ್ಕಳ ಮನದಲ್ಲಿ ಹುಟ್ಟುಹಾಕುತ್ತಿದೆ. ಇಲ್ಲಿನ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ಎಲಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮನೋಭಾವನೆಯನ್ನು ತುಂಬುವಲ್ಲಿ ಯಶಸ್ವಿಯಾಗಲಿ
ಶ್ರೀ ಮಂಗೇಶ್ ಭೇಂಡೆ
ಅಖಿಲಭಾರತೀಯ ವ್ಯವಸ್ಥಾ ಪ್ರಮುಖ್
ರಾಷ್ಟ್ರೀಯ ಸ್ವಯಂಸೇವಕ ಸಂಘ. ನಾಗಪುರ
ಶಿಕ್ಷಣ ಕ್ಷೇತ್ರದ ನೂತನ ಪ್ರಯೋಗವಾಗಿ ಆರಂಭವಾದ ಪ್ರಬೋಧಿನೀ ಗುರುಕುಲವು ಇಂದು ಅನೇಕ ಶಿಕ್ಷಣ ತಜ್ಞರ ಗಮನ ಸೆಳೆಯುತ್ತಿದೆ. ಇಲ್ಲಿನ ಪ್ರಯೋಗ ನಿಜಕ್ಕೂ ಅಭಿನಂದನೀಯ
ಶ್ರೀ ವಿನಯ ಹೆಗ್ಡೆ
ಅಧ್ಯಕ್ಷರು, ನಿಟ್ಟೆ ಸಮೂಹ ಸಂಸ್ಥೆ. ಮಂಗಳೂರು
ಮಲೆನಾಡಿನ ಈ ಪುಟ್ತ ಹಳ್ಳಿಯಲ್ಲಿ ಕಾರ್ಯ ಪ್ರವೃತ್ತವಾಗಿರುವ ಪ್ರಬೋಧಿನೀ ಗುರುಕುಲವು ದೇಶದಾದ್ಯಂತ ಹೆಸರುವಾಸಿಯಾಗಲಿ. ಇಲ್ಲಿನ ವಿದ್ಯಾರ್ಥಿಗಳಿಗೆ ಶುಭವಾಗಲಿ.
ಡಾ. ವಿಜಯಸಂಕೇಶ್ವರ್
ಸಂಸ್ಥಾಪಕರು. ವಿ.ಆರ್.ಎಲ್.ಸಮೂಹ ಸಂಸ್ಥೆ. ಹುಬ್ಬಳ್ಳಿ
"ಎಕನಾಮಿಕ್ಸ್, ಹೋಂ ಸೈನ್ಸ್" ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಇನ್ನು ಮುಂದೆ ಭಾರತೀಯ ದೃಷ್ಟಿಯಿಂದ ನೋಡಬೇಕಾಗಿದೆ. ಆರ್ಥಿಕತೆಯನ್ನು ಅರ್ಥಮಾಡಿಕೊಂಡು ಮಾತಾಡಬಲ್ಲ ಜನ ಸಮುದಾಯ ನಮ್ಮದಾಗಬೇಕಿದೆ. ಅಂತಹ ಪ್ರಯತ್ನವನ್ನು ಪ್ರಬೋಧಿನೀ ಗುರುಕುಲವು ಮಾಡುತ್ತಿದೆ.
ಶ್ರೀ ಕಿಶೋರ್ ಕುಮಾರ್ ಹೆಗ್ಡೆ
ಸಂಸ್ಥಾಪಕರು. ಲೈಫ಼್ ಲೈನ್ ಫ಼ೀಡ್ಸ್ ಇಂಡಿಯಾ ಪ್ರೈ.ಲಿ.
ಚಿಕ್ಕಮಗಳೂರು.
ಭಾರತೀಯ ತತ್ವಶಾಸ್ತ್ರ ಹಾಗೂ ಪಾರಂಪರಿಕ ಜ್ಞಾನ ಪರಂಪರೆಗೆ ಸಂಬಂಧಿಸಿದ ಉನ್ನತ ಅಧ್ಯಯನ ಹಾಗೂ ಅಧ್ಯಾಪನ ಕಾರ್ಯಗಳು ಪ್ರಬೋಧಿನೀ ಗುರುಕುಲದಲ್ಲಿ ನಿರಂತರವಾಗಿ ನಡೆಯುತ್ತಿದೆ. ಶುಭವಾಗಲಿ
ಶ್ರೀ ವಿ. ನಾಗರಾಜ್- ಮಿಥಿಕ್ ಸೊಸೈಟಿ
ಮಾನ್ಯ ಗೌರವ ಕಾರ್ಯದರ್ಶಿಗಳು
ದಿ. ಮಿಥಿಕ್ ಸೊಸೈಟಿ. ಬೆಂಗಳೂರು.
ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ವಿಶಿಷ್ಟವಾದ ಶಿಕ್ಷಣ ಪದ್ಧತಿಯನ್ನು ಪ್ರಬೋಧಿನೀ ಗುರುಕುಲದಲ್ಲಿ ಅಳವಡಿಸಿಕೊಂಡು ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ 12 ವರ್ಷಗಳ ಶಿಕ್ಷಣವನ್ನು ಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಈ ಶಿಕ್ಷಣ ಕೇಂದ್ರಕ್ಕೆ ಉತ್ತರೋತ್ತರ ಶ್ರೇಯಸ್ಸು ಲಭಿಸಲಿ. ಶ್ರೀ ಜ್ವಾಲಾಮಾಲಿನಿ ಅನುಗ್ರಹವಿರಲಿ.
ಪರಮ ಪೂಜ್ಯ ಸ್ವಸ್ತಿ ಶ್ರೀಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು
ಸಿಂಹನಗದ್ದೆ ಜೈನ ಸಂಸ್ಥಾನ. ನರಸಿಂಹರಾಜಪುರ.
ಆಧುನಿಕ ವಿದ್ಯೆಯ ಜೊತೆಗೆ ಈ ದೇಶದ ಪ್ರಾಚೀನ ವಿದ್ಯೆಗೆ ವಿಶೇಷ ಆದ್ಯತೆ ನೀಡಿ, ಪ್ರಬೋಧನ ನೀಡುತ್ತಿರುವ “ಪ್ರಬೋಧಿನೀ ಗುರುಕುಲ” ವನ್ನು ದರ್ಶಿಸಿ ಅಮಿತಾನಂದವಾಗಿದೆ. ಇಂತಹ ಗುರುಕುಲಗಳೇ ಭಾರತದ ಮುಂದಿನ ಶಿಕ್ಷಣ ಕ್ರಾಂತಿಗೆ ದಾರಿದೀಪಗಳು.
ಜಗದ್ಗುರು ಶ್ರೀ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಗಳು
ಶ್ರೀ ಶೈಲ
ಪ್ರಬೋಧಿನೀ ಗುರುಕುಲವು ಇಂದು ಇಡೀ ದೇಶವೇ ಗುರುತಿಸುವಷ್ಟು ಬೆಳೆದು ನಿಂತಿದೆ. ಇಲ್ಲಿನ ವಿದ್ಯಾರ್ಥಿಗಳ ಆತ್ಮ ವಿಶ್ವಾಸ ನೋಡಿ ಆನಂದವಾಗಿದೆ. ಇಂತಹ ಗುರುಕುಲಗಳು ಇನ್ನೂ ಹೆಚ್ಚು ಹೆಚ್ಚು ಆರಂಭವಾಗಲಿ.
ಡಾ|| ಎಸ್. ನಾಗರತ್ನ. S-VYASA. ಯೋಗ ವಿಶ್ವವಿದ್ಯಾನಿಲಯ
ಪ್ರಶಾಂತಿ ಕುಟೀರ. ಬೆಂಗಳೂರು
ಸಮಾಜದ ಎಲ್ಲಾ ವರ್ಗಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ವೇದಶಾಸ್ತ್ರಗಳ ಅಧ್ಯಯನ ಮಾಡಲು ಸಮಾನವಾದ ಅವಕಾಶ ಕಲ್ಪಿಸಿರುವ ಪ್ರಬೋಧಿನೀ ಗುರುಕುಲದ ಕಾರ್ಯ ಅತ್ಯಂತ ಶ್ಲಾಘನೀಯ.
ಡಾ|| ಪ್ರವೀಣ್ ಭಾಯಿ ತೊಗಾಡಿಯಾ
ಇಂದಿನ ಕಾಲಮಾನದಲ್ಲಿ ನಾವು ಕಲ್ಪಿಸಿಕೊಳ್ಳಲು ಮಾತ್ರವಲ್ಲ ಕನಸು ಕಾಣಲೂ ಸಾಧ್ಯವಾಗದ ಶಿಕ್ಷಣ ಕೇಂದ್ರವನ್ನು ನಿಜವಾದ ಅರ್ಥದಲ್ಲಿ ಸಂದರ್ಶಿಸುವ ಭಾಗ್ಯ ನನ್ನದಾಗಿದೆ. ಪುರುಷಾರ್ಥಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಮರ್ಥವಾದ ವ್ಯವಸ್ಥೆ ಇಲ್ಲಿದೆ. ಎಡ-ಬಲ ಎನ್ನುವ ಬೇಧ ಭಾವ ಇಲ್ಲದೆ ಈ ಗುರುಕುಲವನ್ನು ಎಲ್ಲರೂ ಸಂದರ್ಶಿಸಬೇಕು ಅನ್ನಿಸುತ್ತಿದೆ.
ಡಾ|| ನಾ. ಮೊಗಸಾಲೆ
ಖ್ಯಾತ ಚಿಂತಕರು ಮತ್ತು ಸಾಹಿತಿಗಳು
It was a pleasant surprise to note very interesting educational initiative undertaken by this institution. Blending traditional and modern education system is astonishing. I appreciate Acharyas and trustees. It is a Great experiment. Keep it up...
Prof. Jogan Shankar
Vice Chancellor- Kuvempu University.
It is my pleasure to see this gurukula. Our rich “Rishi paramapara” is getting rejuvenated in this holly place may almighty pour his blessings on this Prabodhini Gurukula
K. Pattabhirama Jois
Ashtanga Yoga Nilaya
Mysore
Thank you for teaching the children about the great glorious past of Baratha Matha. And Sanatana Dharma. I would like to have had the opportunity of have been born and raise in a place like this
PEORO KUFFER
FLORIANOPOLIS-SC
BRAZIL
On the basis of Hidu Dharma entire system of Education is being practised here. It is the Duty of society to patronage this Gurukula
Dr. S. Krishna Kumar
Chairman
Indian Council of Astrological Sciences.
ಪ್ರಬೋಧಿನೀ ಗುರುಕುಲವನ್ನು ನೋಡಿ, ತಿಳಿದು ಸಂತಸವಾಯಿತು. ಇಂತಹ ಗುರುಕುಲಗಳಿಂದ ಮಾತ್ರ ನಮ್ಮ ಸಂಸ್ಕೃತಿಯನ್ನು ಯುವಪೀಳಿಗೆಗೆ ತಿಳಿಸಲು ಸಾಧ್ಯವಾಗಿದೆ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಈ ಗುರುಕುಲವನ್ನು ನೋಡಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ.
ಬಿ.ಕೆ. ಸುಮಿತ್ರಾ, ಖ್ಯಾತ ಗಾಯಕಿ
ಬಹಳ ದಿನದ ನನ್ನ ಕನಸು ಇಂದು ಈಡೇರಿದೆ. ವೇದಕಾಲದಲ್ಲಿ ನಡೆಸುತ್ತಿದ್ದ ಗುರುಕುಲ ಪದ್ಧತಿಯಲ್ಲಿ ವೇದ ವೇದಾಂಗಗಳನ್ನು ಇಲ್ಲಿ ಹೇಳಿಕೊಡಲಾಗುತ್ತಿದೆ.
ದಿ|| ಮತ್ತೂರು ಕೃಷ್ಣಮೂರ್ತಿ. ಭಾರತೀಯ ವಿದ್ಯಾಭವನ