The Prabodhini Trust is incorporated on 23-02-1979 with the goal of establishing healthy society. the trust is engaged in social, educational service activities in the entire district of chikkamagaluru.
Prabodhini Trust has its Head Quarters in Chitrakuta on the banks of holy river Tunga. Chitrakuta is covered by rich Western Ghats forest which is known for its density. Prabodhini Trust is located near Sringeri where Adiguru Shankaracharya did tapas and established Sri Sharada Dakshinamnaya Peetham.
“Prabodhini Gurukula” is the major project of the Prabodhini Trust. The campus is spread over 10 Acers amidst rich greenery. Lot of discussions are going on about the educational system of our country, number of experiments are made and many ideologies are introduced with the intention of bringing moral values in education field. Prabodhii Gurukula is one of such unique experiment made by the well-known scholars, Social workers, and Educatioanalists to rejuvenate the cultural value of India.
The children are getting basic knowledge in all the fields of Panchamukhi Shikshana within 5 years. After that they continue their higher studies which are only meant for Agriculture and Yoga
As we know that Agriculture is the only source of food of mankind. It is applicable to the present future and forever. In the scientific and technical age Agriculture is neglected by the youth. To cultivate a good interest on this field we introduced Agriculture for higher studies.
Yoga is given by the ancestors to the world. We had the golden time when yoga is being imparted as life science and studied by everyone. Now the Yoga became a Universal science and the entire world is looking forward at our nation to teach Yoga. It is the greatest need and responsibility to preserve and continue our Yoga culture. For this the youth had to take the great venture. By keeping this in view we started higher education for our students.
There is a facility to get degree from other universities.
The student who have completed five years of education in Gurukulam – selected by the Acharyas on the basis of their interest and capability.
Students who have completed SSLC exam and who have the basic knowledge of Sanskrit can apply and they are selected by interviews.
ಪ್ರಬೋಧಿನೀ ಗುರುಕುಲದಲ್ಲಿ ವಿಶಿಷ್ಠವಾದ ಶಿಕ್ಷಣವನ್ನು ಕಲಿಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಚಟುವಟಿಕೆಶೀಲರು. ಇವರನ್ನು ನೋಡಿ ಆನಂದಲೋಕದಲ್ಲಿ ವಿಹರಿಸಿದೆ.
ಪ್ರಬೋಧಿನೀ ಗುರುಕುಲದಲ್ಲಿ ನೀಡುತ್ತಿರುವ ಭಾರತೀಯ ಪರಂಪರೆಯ ಶಿಕ್ಷಣ ಇಂದಿನ ಕಾಲಕ್ಕೆ ಅತ್ಯವಶ್ಯವಾಗಿದೆ. ಭಾರತೀಯ ಜ್ಞಾನರಾಶಿಯ ಅಧ್ಯಯನ ಹಾಗೂ ಅಧ್ಯಾಪನ ಕಾರ್ಯ ಇಲ್ಲಿ ನಡೆಯುತ್ತಿದೆ. ಮೈಸೂರು ಸಂಸ್ಥಾನವು ಗುರುಕುಲದ ಎಲ್ಲಾ ಕಾರ್ಯಗಳ ಜೊತೆಗಿರುತ್ತದೆ.
• इदं गुरुकुलम् अत्यंतं समीचीनं वर्तते। सुन्दर् वातावरणं रमणीयं वर्तते। अत्र स्थितव्यवस्था, पाठक्रमः तथा वॆदमन्त्रॊच्चरणं दृष्ट्वा सन्तॊषः अभवत्। अस्माकं हिन्दूपरम्परासहितं इदं गुरुकुलम् इतॊपि वर्धताम् अभिवर्धताम् इति आशास्महे।
• ಪ್ರಬೋಧಿನೀ ಗುರುಕುಲವು ಇಂದು ಇಡೀ ದೇಶವೇ ಗುರುತಿಸುವಷ್ಟು ಬೆಳೆದು ನಿಂತಿದೆ. ಇಲ್ಲಿನ ವಿದ್ಯಾರ್ಥಿಗಳ ಆತ್ಮ ವಿಶ್ವಾಸ ನೋಡಿ ಆನಂದವಾಗಿದೆ. ಇಂತಹ ಗುರುಕುಲಗಳು ಇನ್ನೂ ಹೆಚ್ಚು ಹೆಚ್ಚು ಆರಂಭವಾಗಲಿ.
• ಗುರುಕುಲ ಮಾದರಿಯ ಶಿಕ್ಷಣವನ್ನು ಇಡೀ ಜಗತ್ತೇ ಒಪ್ಪಿಕೊಳ್ಳುವ ದಿನಗಳು ಮುಂದೆ ಬರಲಿವೆ. ಈ ನಿಟ್ಟಿನಲ್ಲಿ ಪ್ರಬೋಧಿನೀ ಗುರುಕುಲದ ಚಟುವಟಿಕೆಗಳು ದೇಶದಾದ್ಯಂತ ವಿಸ್ತಾರವಾಗಬೇಕು. ಮುಂಬರುವ ದಿನಗಳಲ್ಲಿ ಪ್ರಬೋಧಿನೀ ಗುರುಕುಲದಲ್ಲಿರುವಂತೆಯೇ ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಕೂಡ ಗುರುಕುಲ ಮಾದರಿಯ ಶಿಕ್ಷಣವನ್ನು ಜಾರಿಗೆ ತರುತ್ತೇವೆ.
• ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರಗಳಲ್ಲಿ ಪಾಲ್ಗೊಂಡಿರುವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹೊಸ ವಿಷಯ ಕಲಿಯುವ ಬಗ್ಗೆ ಇರುವ ಆಸಕ್ತಿ ನಿಜಕ್ಕೂ ಅದ್ಭುತ. ಸಮಾಜದ ಅನೇಕ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ ಮಕ್ಕಳೊಂದಿಗೆ ಸಂವಾದದಂತಹ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಶುಭವಾಗಲಿ.
• There is no other issues more important than Education in India. And the Education in India Should be rooted by ancient values. The main goal of Prabodhini Gurukula is to cultivate Ancient Vedic culture among the society. And the Vedic Gurukula Model of Education is the ultimate solution for modern Problems. Prabodhini Gurukula should gain capacity to teach Vedic culture to the world.
• ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳ ಲವಲವಿಕೆ, ಉತ್ಸಾಹಗಳನ್ನು ನೋಡಿ ಆನಂದವಾಗಿದೆ. ಇಲ್ಲಿನ ವಿದ್ಯಾರ್ಥಿಗಳಲ್ಲಿರುವ ಪ್ರಶ್ನೆ ಮಾಡುವ ಸ್ವಭಾವವು ಅಚ್ಚರಿ ಮೂಡಿಸುವಂತಹದ್ದು. ಭಾರತೀಯ ಸಂಸ್ಕೃತಿಯೇ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಜೀವಾಳವಾಗಿದೆ.
• गुरुकुल ने विश्व के सबसे प्राचीन वेद जैसे साहित्य का अभ्यास करने का एक खुला अवसर प्रदान किया है। इस गुरुकुल को विकसित करना हिंदू समाज की जिम्मेदारी है। एक दिन पूरी दुनिया गुरुकुल प्रणाली के बारे में सुनेगी। तब हमें देना चाहिए, यह गर्व की बात है कि प्रबोधिनी गुरुकुल आयु के अनुरूप गुरुकुल शिक्षा प्रदान कर रहा हैं।
• ಗುರುಕುಲ ಮಾದರಿಯ ಶಿಕ್ಷಣವು ಆಧುನಿಕ ಶಿಕ್ಷಣಕ್ಕೆ ಬಲವಾದ ಪರ್ಯಾಯ ಪದ್ಧತಿಯಾಗಿದೆ. ಹಣ ಗಳಿಸುವುದೊಂದೇ ಆಧುನಿಕ ಶಿಕ್ಷಣದ ಗುರಿಯಾದರೆ, ಮನುಕುಲದ ಸರ್ವಾಂಗೀಣ ಉನ್ನತಿಯೇ ಪ್ರಾಚೀನ ಗುರುಕುಲ ಮಾದರಿಯ ಮಹೋನ್ನತ ಧ್ಯೇಯವಾಗಿದೆ. ಇಂತಹ ಉದಾತ್ತ ಧ್ಯೇಯವನ್ನಿರಿಸಿಕೊಂಡು ಪ್ರಬೋಧಿನೀ ಗುರುಕುಲವು ಕಾರ್ಯೋನ್ಮುಖವಾಗಿದೆ.
• ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳಲ್ಲಿ ಶಿಸ್ತು, ಕರ್ತವ್ಯ ನಿಷ್ಠೆ, ಛಲ, ಶ್ರದ್ಧೆ, ರಾಷ್ಟ್ರಾಭಿಮಾನ ಮತ್ತು ಸಮರ್ಪಣಾ ಮನೋಭಾವಗಳು ತುಂಬಿರುವುದು ಸಂತೋಷದ ಸಂಗತಿ. ಪ್ರಬೋಧಿನೀ ಗುರುಕುಲವು 24 ವರ್ಷಗಳನ್ನು ಪೂರೈಸಿದ ಶುಭಸಂದರ್ಭದರ್ಲ್ಲಿ ಶ್ರೀ ಪೀಠವು ಗುರುಕುಲವನ್ನು ಸಂದರ್ಶಿಸಿದಾಗ ಈ ಎಲ್ಲಾ ವಿಷಯಗಳು ಆನಂದವನ್ನುಂಟುಮಾಡಿದೆ.
• ಗುರುಕುಲ ಮಾದರಿಯ ಶಿಕ್ಷಣ ಅತ್ಯಂತ ಮಹತ್ವದ್ದು, ಕೇವಲ ಪುಣ್ಯ ವಂತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಆಹಾರ, ನಿದ್ರೆ, ಆಟಗಳೊಂದಿಗೆ ಅಧ್ಯಯನ ಮಾಡಿದಾಗ ಮಾತ್ರ ಸಮಗ್ರ ವ್ಯಕ್ತಿತ್ವ ವಿಕಾಸವಾಗುತ್ತದೆ. ಬರೀ ಅಧ್ಯಯನ ಮಾತ್ರ ಮಾಡಿದರೆ ಅದು ಸಮಗ್ರ ವಿಕಾಸವಾಗುವುದಿಲ್ಲ.
• ಪಾರಂಪರಿಕ ಶಿಕ್ಷಣ, ಆರೋಗ್ಯ, ಸಂಸ್ಕಾರ, ಮಾನವೀಯ ಮೌಲ್ಯಗಳು, ಮುಂತಾದ ಅನೇಕ ಸದ್ಗುಣಗಳು ಪ್ರಬೋಧಿನೀ ಗುರುಕುಲದಲ್ಲಿ ವಿಕಾಸವಾಗುತ್ತಿದೆ. ಇಂತಹ ಗುರುಕುಲವು ನಮ್ಮ ನಡುವಲ್ಲೇ ಕಾರ್ಯನಿರತವಾಗಿರುವುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ತಂದಿದೆ.
• ಪ್ರಬೋಧಿನೀ ಗುರುಕುಲದ ಪರಿಸರ ಸುಂದರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಭವಿಷ್ಯದಲ್ಲಿ ತಾವೇನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಅವರಲ್ಲಿದೆ. ಶುಭಾಶಯಗಳು
• ಮನುಷ್ಯನ ಸರ್ವತೋಮುಖ ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ.ಪ್ರಾಚೀನ ಭಾರತದಲ್ಲಿ ಗುರುಕುಲ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯಶಾಲಿ ವ್ಯಕ್ತಿತ್ವ ನಿರ್ಮಾಣವಾಗುತ್ತಿತ್ತು. ಇಂದಿನ ದಿನಮಾನದಲ್ಲಿ ಪ್ರಾಚೀನ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸುತ್ತಿರುವ ಪ್ರಬೋಧಿನೀ ಗುರುಕುಲದ ಕಾರ್ಯ ಪ್ರಶಂಸನೀಯ.
• ನಮ್ಮ ಸನಾತನ ಸಂಸ್ಕೃತಿಯು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನ ಹಾಗೂ ಪರಿಪೂರ್ಣ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕೃತಿಯ ಹಿರಿಮೆ ಹಾಗೂ ಭವ್ಯತೆಯನ್ನು ಸಂರಕ್ಷಿಸಿಕೊಳ್ಳಬೇಕಾದರೆ, ನಮ್ಮ ಆರ್ಷ ಗ್ರಂಥಗಳ ಆಧಾರದಲ್ಲಿ ನಿರ್ಮಾಣವಾದ ಗುರುಕುಲ ಮಾದರಿಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾಗಿದೆ. ಇಂತಹ ಉದ್ದೇಶದಿಂದ ಪ್ರಬೋಧಿನೀ ಗುರುಕುಲವು ಕಾರ್ಯ ನಿರ್ವಹಿಸುತ್ತಿದೆ.
• ಸನಾತನ ಸಂಸ್ಕೃತಿಯ ಆಧಾರದಲ್ಲಿ ಶಿಕ್ಷಣ ನೀಡಬೇಕಾದುದು ಈಗಿನ ಕಾಲದ ತುರ್ತು ಅಗತ್ಯವಾಗಿದೆ. ಇಂತಹ ಪ್ರಾಮಾಣಿಕ ಪ್ರಯತ್ನವನ್ನು ಪ್ರಬೋಧಿನೀ ಗುರುಕುಲದಲ್ಲಿ ನಾವು ನೋಡಬಹುದಾಗಿದೆ. ಸುಂದರ ವಾತಾವರಣ, ಸರಳ ಜೀವನಶೈಲಿ. ಉತ್ತಮ ಶಿಕ್ಷಣ ವ್ಯವಸ್ಥೆ ಇಲ್ಲಿದೆ.
• ಭಾರತವೆಂದರೆ ವೇದ, ಪುರಾಣ, ಉಪನಿಷತ್ತು, ರಾಮಾಯಣ, ಮಹಾಭಾರತ ಮುಂತಾದ ಅಮೂಲ್ಯ ವಿದ್ಯೆಗಳ ಭಂಡಾರ. ಅಂತಹ ಅಮೂಲ್ಯ ವಿದ್ಯೆಯನ್ನು ಹಂಚಿದಷ್ಟೂ ಹೆಚ್ಚಾಗುತ್ತದೆ. ಪ್ರಬೋಧಿನೀ ಗುರುಕುಲದಲ್ಲಿ ಆರ್ಷವಿದ್ಯೆಯ ಪ್ರಸಾರಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶುಭವಾಗಲಿ.
• ಪ್ರಬೋಧಿನೀ ಗುರುಕುಲದಲ್ಲಿ ನೀಡುತ್ತಿರುವ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣವು ಅತ್ಯಂತ ವೈಜ್ಞಾನಿಕವಾಗಿದೆ. ಬದುಕುವ ಕಲೆಯನ್ನು ಇಲ್ಲಿ ಕಲಿಸಿಕೊಡಲಾಗುತ್ತಿದೆ. ಮ್ನಮ್ಮ ಸಂಸ್ಕೃತಿ ಪರಂಪರೆಯನ್ನು ಗೌರವಿಸುವ ಮನೋಭಾವ ಇಲ್ಲಿನ ವಿದ್ಯಾರ್ಥಿಗಳಲ್ಲಿದೆ
• भारतीय संस्कृति सर्वदेशीय है। हमारी एक महान संस्कृति है जो अनादि काल से विश्व को ज्ञान का प्रकाश देती आ रही है। गुरुकुल जैसी संस्थाएं ही कारण हैं कि यह संस्कृति आज भी जीवित है। प्रबोधिनी गुरुकुल जैसी संस्थाएं पूरे देश में शुरू की जानी हैं।
• ಪ್ರಬೋಧಿನೀ ಗುರುಕುಲದ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಲ್ಲಿನ ಶಿಸ್ತುಬದ್ಧ ಜೀವನಶೈಲಿ, ಸಂಸ್ಕೃತದಂತಹ ಶ್ರೇಷ್ಷ್ಠ ಸಾಹಿತ್ಯಗಳ ಅಧ್ಯಯನ, ಅಧ್ಯಾಪನ ಎಲ್ಲವೂ ಅತ್ಯಂತ ವಿಶಿಷ್ಠವಾಗಿದೆ.
• प्रबोधिनी गुरुकुल आज पूरे देश में प्रसिद्ध हो गया है। प्रबोधिनी गुरुकुल शिक्षा के पारंपरिक गुरुकुल मॉडल को लागू करने में अन्य संस्थानों के लिए एक संरक्षक संस्थान है।
• ಪ್ರಬೋಧಿನೀ ಗುರುಕುಲದ ಚಟುವಟಿಕೆಗಳನ್ನು ಆರಂಭದ ದಿನದಿಂದಲೂ ನೋಡುತ್ತಿದ್ದೇನೆ. ಭಾರತೀಯ ಶಾಸ್ತ್ರ ಹಾಗೂ ಕ್ಷಾತ್ರ ಎರಡೂ ಮೌಲ್ಯಗಳ ಅನುಷ್ಠಾನ ಈ ಗುರುಕುಲದಲ್ಲಿ ನಡೆಯುತ್ತಿದೆ. ಪ್ರಾಚೀನ ಜ್ಞಾನದೊಂದಿಗೆ ರಾಷ್ಟ್ರೀಯ ಚಿಂತನೆಗಳನ್ನು ಈ ಗುರುಕುಲದಲ್ಲಿ ಅಳವಡಿಸಿಕೊಂಡಿದ್ದಾರೆ.
• आधुनिक शिक्षा के हमले के बीच, प्रबोधिनी गुरुकुल प्राचीन गुरुकुल प्रणाली को पुनर्जीवित करने के लिए लगातार काम कर रहा है।
• ಸಮಾಜದ ಪ್ರತಿಯೊಬ್ಬನೂ ಕ್ರಿಯಾಶೀಲನಾದಾಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ನಿಷ್ಕ್ರಿಯ ಸಮಾಜಕ್ಕೆ ಜೀವ ತುಂಬುವ ಕೆಲಸ ಪ್ರಬೋಧಿನೀ ಗುರುಕುಲದಲ್ಲಿ ನಡೆಯುತ್ತಿದೆ.
• ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ಪ್ರಬೋಧಿನೀ ಗುರುಕುಲದ ಎಲ್ಲಾ ಯೋಜನೆಗಳಿಗೆ ಪೂರ್ಣ ಸಹಕಾರ ನೀಡಬೇಕಾದುದು ಎಲ್ಲರ ಕರ್ತವ್ಯವಾಗಿದೆ.
• ಭಾರತವನ್ನು ಭಾರತವನ್ನಾಗಿಯೇ ಉಳಿಸಬೇಕಾದರೆ ಮತ್ತೊಮ್ಮೆ ದೇಶದಲ್ಲಿ ಗುರುಕುಲ ಪದ್ಧತಿಯ ಪುನರ್ ಪ್ರತಿಷ್ಠಾಪನೆಯಾಗಬೇಕು. ಪ್ರಬೋಧಿನೀ ಗುರುಕುಲವು ಶಿಕ್ಷಣ ಕ್ಶೇತ್ರದಲ್ಲಿ ಬದಲಾವಣೆ ತರಲು ದೃಢವಾದ ಹೆಜ್ಜೆಯನ್ನಿಟ್ಟಿದೆ.
• ಸಮಾಜಕ್ಕೆ ಅಗತ್ಯವಾದ ಪಾರಂಪರಿಕ ವಿದ್ಯೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಪ್ರಬೋಧಿನೀ ಗುರುಕುಲವು ನಿರಂತರವಾಗಿ ಮಾಡಿಕೊಂದು ಬಂದಿದೆ. ನಮ್ಮ ದೇಶದಲ್ಲಿರುವ ಲಕ್ಷಾಂತರ ಶಾಲೆಗಳಲ್ಲಿ ಗುರುಕುಲದ ಮೌಲ್ಯಗಳನ್ನು ಪ್ರಚುರಪಡಿಸಬೇಕಾಗಿದೆ.
• ಪ್ರಬೋಧಿನೀ ಗುರುಕುಲದ ವಿದ್ಯಾರ್ಥಿಗಳಲ್ಲಿ ಹೊಸತನ್ನು ಕಲಿಯುವ ಅಪರೂಪದ ಗುಣವಿದೆ. ಅವರ ಆಸಕ್ತಿಗೆ ತಕ್ಕಂತಹ ಪಠ್ಯವಸ್ತುಗಳನ್ನು ಹೊಂದಿಸಿರುವ ಇಲ್ಲಿನ ಶಿಕ್ಷಣ ಪದ್ಧತಿಯು ಉಳಿದೆಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
• प्रबोधिनी गुरुकुल में जाकर अच्छा लगा। परीक्षा डर के बिना खुले वातावरण में पढ़ने वाले बच्चे भाग्यशाली हैं।
• ಪ್ರಬೋಧಿನೀ ಗುರುಕುಲವು ನಿಜವಾದ ಅರ್ಥದಲ್ಲಿ ಗುರುಕುಲವೇ ಆಗಿದೆ. ನದೀತೀರದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ.
• ಇಲ್ಲಿ ಕಲಿಯುತ್ತಿರುವ ಚಿಕ್ಕ ಚಿಕ್ಕ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆ ತುಂಬಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಶಾಸ್ತ್ರ ಹಾಗೂ ಕ್ಷಾತ್ರ ಎರಡೂ ಆಯಾಮಗಳ ವಿಕಾಸ ಇಲ್ಲಿನ ಮಕ್ಕಳ ಜೀವನದಲ್ಲಿ ಆಗುತ್ತಿದೆ.
• ಪ್ರಬೋಧಿನೀ ಗುರುಕುಲವು ದೇಶವೇ ಮೊದಲು ಎಂಬ ಭಾವವನ್ನು ಮಕ್ಕಳ ಮನದಲ್ಲಿ ಹುಟ್ಟುಹಾಕುತ್ತಿದೆ. ಇಲ್ಲಿನ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ಎಲಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮನೋಭಾವನೆಯನ್ನು ತುಂಬುವಲ್ಲಿ ಯಶಸ್ವಿಯಾಗಲಿ
• ಶಿಕ್ಷಣ ಕ್ಷೇತ್ರದ ನೂತನ ಪ್ರಯೋಗವಾಗಿ ಆರಂಭವಾದ ಪ್ರಬೋಧಿನೀ ಗುರುಕುಲವು ಇಂದು ಅನೇಕ ಶಿಕ್ಷಣ ತಜ್ಞರ ಗಮನ ಸೆಳೆಯುತ್ತಿದೆ. ಇಲ್ಲಿನ ಪ್ರಯೋಗ ನಿಜಕ್ಕೂ ಅಭಿನಂದನೀಯ
• ಮಲೆನಾಡಿನ ಈ ಪುಟ್ತ ಹಳ್ಳಿಯಲ್ಲಿ ಕಾರ್ಯ ಪ್ರವೃತ್ತವಾಗಿರುವ ಪ್ರಬೋಧಿನೀ ಗುರುಕುಲವು ದೇಶದಾದ್ಯಂತ ಹೆಸರುವಾಸಿಯಾಗಲಿ. ಇಲ್ಲಿನ ವಿದ್ಯಾರ್ಥಿಗಳಿಗೆ ಶುಭವಾಗಲಿ.
• "ಎಕನಾಮಿಕ್ಸ್, ಹೋಂ ಸೈನ್ಸ್" ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಇನ್ನು ಮುಂದೆ ಭಾರತೀಯ ದೃಷ್ಟಿಯಿಂದ ನೋಡಬೇಕಾಗಿದೆ. ಆರ್ಥಿಕತೆಯನ್ನು ಅರ್ಥಮಾಡಿಕೊಂಡು ಮಾತಾಡಬಲ್ಲ ಜನ ಸಮುದಾಯ ನಮ್ಮದಾಗಬೇಕಿದೆ. ಅಂತಹ ಪ್ರಯತ್ನವನ್ನು ಪ್ರಬೋಧಿನೀ ಗುರುಕುಲವು ಮಾಡುತ್ತಿದೆ.
• ಭಾರತೀಯ ತತ್ವಶಾಸ್ತ್ರ ಹಾಗೂ ಪಾರಂಪರಿಕ ಜ್ಞಾನ ಪರಂಪರೆಗೆ ಸಂಬಂಧಿಸಿದ ಉನ್ನತ ಅಧ್ಯಯನ ಹಾಗೂ ಅಧ್ಯಾಪನ ಕಾರ್ಯಗಳು ಪ್ರಬೋಧಿನೀ ಗುರುಕುಲದಲ್ಲಿ ನಿರಂತರವಾಗಿ ನಡೆಯುತ್ತಿದೆ. ಶುಭವಾಗಲಿ
• ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ವಿಶಿಷ್ಟವಾದ ಶಿಕ್ಷಣ ಪದ್ಧತಿಯನ್ನು ಪ್ರಬೋಧಿನೀ ಗುರುಕುಲದಲ್ಲಿ ಅಳವಡಿಸಿಕೊಂಡು ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ 12 ವರ್ಷಗಳ ಶಿಕ್ಷಣವನ್ನು ಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಈ ಶಿಕ್ಷಣ ಕೇಂದ್ರಕ್ಕೆ ಉತ್ತರೋತ್ತರ ಶ್ರೇಯಸ್ಸು ಲಭಿಸಲಿ. ಶ್ರೀ ಜ್ವಾಲಾಮಾಲಿನಿ ಅನುಗ್ರಹವಿರಲಿ.